ಪತಿಗಾಗಿ ಎರಡು ಮಕ್ಕಳೊಂದಿಗೆ ಮಹಿಳೆ ಹೋರಾಟ: ಪತಿ ಮನೆ ಮುಂದೆ ಅಹೋರಾತ್ರಿ ಧರಣಿ
ರಾಯಚೂರು: ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ಮಹಿಳೆಯೊಬ್ಬರು ತನ್ನ ಗಂಡನಿಗಾಗಿ ಎರಡು ಮಕ್ಕಳೊಂದಿಗೆ ಪತಿ ಮನೆಯ ಮುಂದೆ ಹೋರಾಟ ನಡೆಸಿದ್ದಾರೆ. ಮೂರು ವರ್ಷ ಸಂಸಾರ ಮಾಡಿ ದೂರವಾಗಿರುವ ಪತಿಗಾಗಿ ಮಹಿಳೆ ಅಮೃತ ಪತಿಯ ಹಾರ್ಡವೇರ್ ಅಂಗಡಿ ಮುಂದೆ ಅಹೋರಾತ್ರಿ ಧರಣಿ ಕುಳಿತಿದ್ದಾಳೆ.


ಅಮೃತಾ, ದರ್ಶನ್ ಮೆಹ್ತಾ 5 ವರ್ಷಗಳ ಕೆಳಗೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಹಟ್ಟಿ ಪಟ್ಟಣದಲ್ಲಿ ವಾಸವಿದ್ದರು. ಆದ್ರೆ ಎರಡು ಮಕ್ಕಳಾದ ಬಳಿಕ ಜಾತಿ ವಿಚಾರಕ್ಕೆ ಪತಿ ಮನೆಯವರು ಖ್ಯಾತೆ ತೆಗೆದಿದ್ದಾರೆ. ಎರಡು ವರ್ಷದಿಂದ ಪತಿ ದೂರವಾಗಿದ್ದು ಮನೆಗೆ ಸೇರಿಸಿಕೊಳ್ಳುತ್ತಿಲ್ಲ ಅಂತ ಮಹಿಳೆ ಆರೋಪಿಸಿದ್ದಾರೆ.
ದರ್ಶನ್ ಗೆ ಮತ್ತೊಂದು ಮದುವೆಗೆ ತಯಾರಿ ವಿಚಾರ ತಿಳಿದು ಮನೆ ಮುಂದೆ ಅಹೋರಾತ್ರಿ ಧರಣಿ ಕುಳಿತಿದ್ದಾಳೆ.
ಮಹಿಳೆಯ ಹೋರಾಟದಿಂದ ಲಿಂಗಸುಗೂರು ಪಟ್ಟಣದ ಜನ ನಿಬಿಡ ಪ್ರದೇಶದಲ್ಲಿ ನಿನ್ನೆಯಿಂದ ಹೈಡ್ರಾಮಾ ನಡೆದಿದೆ.
ಮಕ್ಕಳೊಂದಿಗೆ ಹಗಲು ರಾತ್ರಿ ಕುಳಿತರು ಪತಿ ಬಂದು ಮಾತನಾಡಿಸುತ್ತಿಲ್ಲ , ಪರಿಹಾರವೂ ಕೊಡುತ್ತಿಲ್ಲ ಅಂತ ಪತ್ನಿ ಆಕ್ರೋಶ ಹೊರಹಾಕಿದ್ದಾಳೆ. ಮಹಿಳೆಯ ಹೋರಾಟದಿಂದ ರಾತ್ರಿ ವೇಳೆ ಪತಿ ಮನೆ ಮುಂದೆ ಹೈಡ್ರಾಮ ನಡೆದಿದ್ದು, ಪೊಲೀಸ್ ಠಾಣೆಗೆ ಬಂದು ದೂರು ಕೊಡುವಂತೆ ಪೊಲೀಸರು ಮನವೊಲಿಕೆ ಯತ್ನಿಸಿದ್ದಾರೆ. ಆದ್ರೆ ಪೊಲೀಸರಿಗೆ ದೂರು ಕೊಡಲು ಹಿಂದೇಟು ಹಾಕಿರುವ ಅಮೃತ ಪತಿಗಾಗಿ ಹೋರಾಟ ಮುಂದುವರೆಸಿದ್ದಾರೆ.





