ಕಸ ಮತ್ತು ಸತ್ತಪ್ರಾಣಿಗಳನ್ನ ತಂದು ಎಸೆಯುತ್ತಿರೋ ಜನರು, ನಗರಸಭೆಯ ನಿರ್ಲಕ್ಷ್ಯ ಜನರ ಹಿಡಿಶಾಪ.
__
ಹಾವೇರಿ- ಅದು ನಗರದ ಹೃದಯ ಭಾಗ ಕೆರೆ. ಆ ಕೆರೆಗೆ ಸೊಳ್ಳೆಗಳ ತಾಣವಾಗಿದೆ. ನಗರದ ಜನರು ಸತ್ತ ಪ್ರಾಣಿಗಳು ಸೇರಿದಂತೆ ಕಸವನ್ನ ತಂದು ಸುರಿದು ಹೋಗುತ್ತಿದ್ದಾರೆ. ಕೆರೆಯ ಸುತ್ತಮುತ್ತಲು ಇರೋ ಜನರು ಮುಗುಮಚ್ಚಿಕೊಂಡು ಓಡಾಡುವ ಪರಸ್ಥಿತಿ ನಿರ್ಮಾಣವಾಗಿದೆ.
ಇದು ಹಾವೇರಿ ಜಿಲ್ಲೆ ರಾಣೇಬೆನ್ನೂರು ನಗರದ ಸಿದ್ದೇಶ್ವರ ನಗರದ ಬಳಿ ಇರೋ ಬೃಹತ್ ಕೆರೆ. ಕಳೆದ ಐದಾರು ವರ್ಷಗಳಿಂದ ಐದಾರು ಎಕರೆ ವಿಸ್ತೀರ್ಣದಲ್ಲಿರೋ ಕೆರೆ ಈಗ ಹಾಳು ಕೊಂಪೆಯಾಗಿದೆ. ನಗರದ ಜನರು ರಾತ್ರಿಯಾದರೆ ಸಾಕು ಕಸ ಹಾಕುವುದು, ಸತ್ತಪ್ರಾಣಿಗಳನ್ನ ಎಸೆದು ಹೋಗುದು ಮಾಡುತ್ತಿದ್ದಾರೆ. ಕೆರೆಯ ಸುತ್ತಮುತ್ತಲಿರುವ ಇರೋ ಜನರು ನರಕಯಾತೆ ಅನುಭವಿಸುತ್ತಿದ್ದಾರೆ. ಪ್ರತಿನಿತ್ಯವೂ ಮುಗುಮುಚ್ಚಿಕೊಂಡು ಓಡಾಡುವ ಪರಸ್ಥಿತಿ ನಿರ್ಮಾಣವಾಗಿದೆ..ನಗರಸಭೆ ಹಲವಾರು ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ..
ಐದಾರು ಎಕರೆ ವಿಸ್ತೀರ್ಣ ಇರೋ ಕೆರೆಗೆ ಕಳೆದ ವರ್ಷ ಲಕ್ಷಾಂತರ ರುಪಾಯಿ ಹಣ ಬಿಡುಗಡೆ ಮಾಡಲು ಸರ್ಕಾರದ ಅಭಿವೃದ್ಧಿ ಮಾಡಲು ಸೂಚನೆ ನೀಡುತ್ತಿತ್ತು. ಸಣ್ಣಪುಟ್ಟ ದುರಸ್ತಿ ಮಾಡಿ ನಗರಸಭೆ ಕೈತೊಳೆದುಕೋಂಡಿದೆ. ಈಗ ಕೆರೆಯ ಸುತ್ತಮುತ್ತಲು ಇರೋ ನೂರಾರು ಕುಟುಂಬಗಳಿಗೆ ಸಾಂಕ್ರಾಮಿಕ ರೋಗಗಳು ಕಾಡುತ್ತಿವೆ. ಸ್ಥಳೀಯ ಶಾಸಕರು ಪ್ರಕಾಶ ಕೋಳಿವಾಡ ಕೆರೆಯ ಅಭಿವೃದ್ಧಿ ಮಾಡಿ ಜನರ ಆರೋಗ್ಯವನ್ನ ಕಾಪಾಡುವ ಕೆಲಸ ಮಾಡಬೇಕು. ಇಲ್ಲಾವಾದರೆ ಮುಂದಿನ ದಿನಗಳಲ್ಲಿ ನಗರಸಭೆಯ ಮುಂದೆ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ..
ಒಟ್ನಲ್ಲಿ ರಾಣೇಬೆನ್ನೂರು ನಗರದ ಹೃದಯ ಭಾಗದಲ್ಲಿರೋ ಕೆರೆಗೆ ಕಸ ಎಸೆಯುದರಿಂದ ಸಾಂಕ್ರಾಮಿಕ ರೋಗದ ತಾಣವಾಗಿದೆ. ಇನ್ನಾದರೂ ನಗರಸಭೆಯ ಸಿಬ್ಬಂದಿ ತಾಲ್ಲೂಕಿನ ಆಡಳಿತ ಕೆರೆಯ ಅಭಿವೃದ್ಧಿ ಮಾಡಿ ಸಾಂಕ್ರಾಮಿಕ ರೋಗ ತಡೆಗಟ್ಟಲು ಕೆಲಸ ಮಾಡಬೇಕಿದೆ.





