Tuesday, August 25, 2026
  • About Us
  • Contact Us
  • Privacy Policy
  • Disclaimer
SS9 TV Kannada
ಸತ್ಯ  •  ವಿಶ್ವಾಸ  •  ಪರಿಣಾಮ
VOICE OF KARNATAKA
NEWS THAT MATTERS
Advertisement
  • Home
  • ಕರ್ನಾಟಕ
  • ಹುಬ್ಬಳ್ಳಿ-ಧಾರವಾಡ
  • ಜಿಲ್ಲಾ ಸುದ್ದಿ
  • ರಾಜಕೀಯ
  • ಕ್ರೈಂ
  • ಸಿನಿಮಾ
  • ಕ್ರೀಡೆ
  • ವೀಡಿಯೊ
  • ಫೋಟೋ ಗ್ಯಾಲರಿ
No Result
View All Result
  • Home
  • ಕರ್ನಾಟಕ
  • ಹುಬ್ಬಳ್ಳಿ-ಧಾರವಾಡ
  • ಜಿಲ್ಲಾ ಸುದ್ದಿ
  • ರಾಜಕೀಯ
  • ಕ್ರೈಂ
  • ಸಿನಿಮಾ
  • ಕ್ರೀಡೆ
  • ವೀಡಿಯೊ
  • ಫೋಟೋ ಗ್ಯಾಲರಿ
No Result
View All Result
SS9 TV Kannada
No Result
View All Result
Home ಹುಬ್ಬಳ್ಳಿ-ಧಾರವಾಡ

ಹುಬ್ಬಳ್ಳಿ ಗ್ರಾಮೀಣಕ್ಕೆ ಹೊಸ ಪೊಲೀಸ್ ಉಪವಿಭಾಗ ಜನರಿಗೆ ಶೀಘ್ರ ಸೇವೆ – ಎಸ್ ಪಿ ಗುಂಜನ್ ಆರ್ಯ

SS9 TV by SS9 TV
August 24, 2026
in ಹುಬ್ಬಳ್ಳಿ-ಧಾರವಾಡ
0
5.1k
SHARES
15.6k
VIEWS
Share on FacebookShare on Twitter

ಹುಬ್ಬಳ್ಳಿ: ಧಾರವಾಡ ಗ್ರಾಮೀಣ ಜಿಲ್ಲೆಯಲ್ಲಿ ಈವರೆಗೆ ಒಂದೇ ಪೊಲೀಸ್ ಉಪವಿಭಾಗವಿತ್ತು. ಇದೀಗ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಉಪವಿಭಾಗವನ್ನು ಹೊಸದಾಗಿ ಆರಂಭಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ತಿಳಿಸಿದರು.

ಗದಗ ರಸ್ತೆಯಲ್ಲಿರುವ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನೂತನ ಡಿವೈಎಸ್‌ಪಿ ಕಚೇರಿಯನ್ನು ಶನಿವಾರ ಪೂಜೆ ನೆರವೇರಿಸುವ ಮೂಲಕ ಉದ್ಘಾಟಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

RelatedPosts

ಮಳೆ ಕೊರತೆ: ರೈತರಿಗೆ ಪ್ರತಿ ಹೆಕ್ಟೇರ್‌ಗೆ ₹25 ಸಾವಿರ ಬರ ಪರಿಹಾರ ನೀಡಲು ಆಗ್ರಹ

ಹಳೇ ಹುಬ್ಬಳ್ಳಿ ಪುಷ್ಕರಣಿ ವಿವಾದ: ಬಿಜೆಪಿ ಹೋರಾಟ ರಾಜಕೀಯ ಪ್ರೇರಿತ – ಶಾಸಕ ಪ್ರಸಾದ ಅಬ್ಬಯ್ಯ

ಹುಬ್ಬಳ್ಳಿ ಗ್ರಾಮೀಣ, ನವಲಗುಂದ, ಅಣ್ಣಿಗೇರಿ, ಕುಂದಗೋಳ ಹಾಗೂ ಗುಡಗೇರಿ ಪೊಲೀಸ್ ಠಾಣೆಗಳು ನೂತನ ಉಪವಿಭಾಗದ ವ್ಯಾಪ್ತಿಗೆ ಬರಲಿವೆ. ಧಾರವಾಡ ಗ್ರಾಮೀಣ ಉಪವಿಭಾಗದ ವ್ಯಾಪ್ತಿಯಲ್ಲಿ ಕಲಘಟಗಿ, ಧಾರವಾಡ ಗ್ರಾಮೀಣ ಹಾಗೂ ಗರಗ ಠಾಣೆಗಳು ಮುಂದುವರಿಯಲಿವೆ ಎಂದರು.

ಆಡಳಿತ ವಿಕೇಂದ್ರೀಕರಣದಿಂದ ಜನರಿಗೆ ಶೀಘ್ರ ಪೊಲೀಸ್ ಸೇವೆ ದೊರೆಯಲಿದೆ. ಗುಡಗೇರಿ ಭಾಗದ ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಧಾರವಾಡಕ್ಕೆ ತೆರಳುವ ಅಗತ್ಯವಿಲ್ಲ. ಹುಬ್ಬಳ್ಳಿಯ ನೂತನ ಉಪವಿಭಾಗ ಕಚೇರಿಯಲ್ಲೇ ಸಮಸ್ಯೆ ಪರಿಹರಿಸಿಕೊಳ್ಳಬಹುದು ಎಂದು ಹೇಳಿದರು.

ಅಕ್ರಮ ಚಟುವಟಿಕೆಗಳ ವಿರುದ್ಧ ಕಾರ್ಯಾಚರಣೆ

ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸಲಾಗುತ್ತಿದೆ. ಮಟ್ಕಾ, ಜೂಜಾಟ, ಗಾಂಜಾ, ಅಕ್ರಮ ಮದ್ಯ ಮಾರಾಟ ಸೇರಿದಂತೆ ಸಂಘಟಿತ ಅಪರಾಧಗಳ ವಿರುದ್ಧ ಪ್ರತಿ ವಾರ ಸುಮಾರು 20ರಿಂದ 25 ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದು ಗುಂಜನ್ ಆರ್ಯ ತಿಳಿಸಿದರು.

ಈದ್ ಮಿಲಾದ್‌ಗೆ ಪೊಲೀಸ್ ಬಂದೋಬಸ್ತ್

ಆಗಸ್ಟ್ 26ರಂದು ಈದ್ ಮಿಲಾದ್ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆ ಪೊಲೀಸ್ ಇಲಾಖೆಯಿಂದ ಪೂರ್ವಭಾವಿ ಸಭೆಗಳನ್ನು ನಡೆಸಲಾಗುತ್ತಿದೆ. ವಿವಿಧ ತಾಲೂಕು ಹಾಗೂ ಪೊಲೀಸ್ ಠಾಣೆಗಳ ಮುಖಂಡರು ಡಿಜೆ ಬಳಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

ಈದ್ ಮಿಲಾದ್ ಬಂದೋಬಸ್ತ್‌ಗಾಗಿ ಎರಡು ಕೆಎಸ್‌ಆರ್‌ಪಿ ತುಕಡಿಗಳನ್ನು ಹೆಚ್ಚುವರಿಯಾಗಿ ಜಿಲ್ಲೆಗೆ ಕರೆಸಿಕೊಳ್ಳಲಾಗುವುದು ಎಂದು ಎಸ್‌ಪಿ ಹೇಳಿದರು.

ಗಣೇಶೋತ್ಸವಕ್ಕೆ ಏಕಗವಾಕ್ಷಿ ಮೂಲಕ ಅನುಮತಿ

ಗಣೇಶೋತ್ಸವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಗಣೇಶೋತ್ಸವ ಆಯೋಜಕರು ಏಕಗವಾಕ್ಷಿ ವ್ಯವಸ್ಥೆ ಮೂಲಕ ಅಗತ್ಯ ಅನುಮತಿಗಳನ್ನು ಪಡೆಯಬಹುದು.

ಸುಪ್ರೀಂ ಕೋರ್ಟ್ ಆದೇಶ ಹಾಗೂ ನಿಯಮಾವಳಿಗಳ ಪ್ರಕಾರ ರಾತ್ರಿ 10 ಗಂಟೆಯವರೆಗೆ ಡಿಜೆ ಬಳಕೆಗೆ ಅನುಮತಿ ನೀಡಲಾಗುವುದು ಎಂದು ಗುಂಜನ್ ಆರ್ಯ ತಿಳಿಸಿದರು.

ನೂತನ ಡಿವೈಎಸ್‌ಪಿ ಆಗಿ ಅಧಿಕಾರ ವಹಿಸಿಕೊಂಡಿರುವ ಶಿವಾನಂದ ಕಟಗಿ ಅವರಿಗೆ ಎಸ್‌ಪಿ ಗುಂಜನ್ ಆರ್ಯ ಹೂಗುಚ್ಛ ನೀಡಿ ಶುಭಕೋರಿದರು. ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ಮುರುಗೇಶ ಚೆನ್ನಣ್ಣವರ, ಸಮೀರ ಮುಲ್ಲಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

SendShare2054Tweet1284Share
Previous Post

ಮಳೆ ಕೊರತೆ: ರೈತರಿಗೆ ಪ್ರತಿ ಹೆಕ್ಟೇರ್‌ಗೆ ₹25 ಸಾವಿರ ಬರ ಪರಿಹಾರ ನೀಡಲು ಆಗ್ರಹ

Next Post

ರೈತರ ಬೆಳೆ ಹಾನಿ ಪರಿಶೀಲಿಸಿದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ…

SS9 TV

SS9 TV

RelatedPosts

ಮಳೆ ಕೊರತೆ: ರೈತರಿಗೆ ಪ್ರತಿ ಹೆಕ್ಟೇರ್‌ಗೆ ₹25 ಸಾವಿರ ಬರ ಪರಿಹಾರ ನೀಡಲು ಆಗ್ರಹ
ಹುಬ್ಬಳ್ಳಿ-ಧಾರವಾಡ

ಮಳೆ ಕೊರತೆ: ರೈತರಿಗೆ ಪ್ರತಿ ಹೆಕ್ಟೇರ್‌ಗೆ ₹25 ಸಾವಿರ ಬರ ಪರಿಹಾರ ನೀಡಲು ಆಗ್ರಹ

August 24, 2026
ಹಳೇ ಹುಬ್ಬಳ್ಳಿ ಪುಷ್ಕರಣಿ ವಿವಾದ: ಬಿಜೆಪಿ ಹೋರಾಟ ರಾಜಕೀಯ ಪ್ರೇರಿತ – ಶಾಸಕ ಪ್ರಸಾದ ಅಬ್ಬಯ್ಯ
ಕರ್ನಾಟಕ

ಹಳೇ ಹುಬ್ಬಳ್ಳಿ ಪುಷ್ಕರಣಿ ವಿವಾದ: ಬಿಜೆಪಿ ಹೋರಾಟ ರಾಜಕೀಯ ಪ್ರೇರಿತ – ಶಾಸಕ ಪ್ರಸಾದ ಅಬ್ಬಯ್ಯ

August 24, 2026

Leave a Reply Cancel reply

Your email address will not be published. Required fields are marked *

Recent Posts

  • ರಾಣೇಬೆನ್ನೂರು ನಗರದ ಹೃದಯ ಭಾಗದಲ್ಲಿರೋ ಕೆರೆ ಈಗ ಸೊಳ್ಳೆಯ ತಾಣ.
  • ರೈತರ ಬೆಳೆ ಹಾನಿ ಪರಿಶೀಲಿಸಿದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ…
  • ಹುಬ್ಬಳ್ಳಿ ಗ್ರಾಮೀಣಕ್ಕೆ ಹೊಸ ಪೊಲೀಸ್ ಉಪವಿಭಾಗ ಜನರಿಗೆ ಶೀಘ್ರ ಸೇವೆ – ಎಸ್ ಪಿ ಗುಂಜನ್ ಆರ್ಯ
  • ಮಳೆ ಕೊರತೆ: ರೈತರಿಗೆ ಪ್ರತಿ ಹೆಕ್ಟೇರ್‌ಗೆ ₹25 ಸಾವಿರ ಬರ ಪರಿಹಾರ ನೀಡಲು ಆಗ್ರಹ
  • ಹಳೇ ಹುಬ್ಬಳ್ಳಿ ಪುಷ್ಕರಣಿ ವಿವಾದ: ಬಿಜೆಪಿ ಹೋರಾಟ ರಾಜಕೀಯ ಪ್ರೇರಿತ – ಶಾಸಕ ಪ್ರಸಾದ ಅಬ್ಬಯ್ಯ

Recent Comments

No comments to show.
SS9 TV Kannada

ಕನ್ನಡದ ನೆಲದ, ನಿಷ್ಠುರ ಮತ್ತು ವಿಶ್ವಾಸಾರ್ಹ ಸುದ್ದಿಗಳಿಗಾಗಿ SS9 TV ಕನ್ನಡ

ವಿಭಾಗಗಳು

  • ಕರ್ನಾಟಕ
  • ಹುಬ್ಬಳ್ಳಿ-ಧಾರವಾಡ
  • ಜಿಲ್ಲಾ ಸುದ್ದಿ
  • ರಾಜಕೀಯ
  • ಕ್ರೈಂ
  • ಸಿನಿಮಾ
  • ಕ್ರೀಡೆ

ಮಾಹಿತಿ

  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Terms & Conditions
  • Disclaimer
  • Editorial Policy

ಉಪಯುಕ್ತ ಲಿಂಕ್‌ಗಳು

  • Advertise With Us
  • Careers
  • Feedback
  • Sitemap
  • ವೀಡಿಯೊ
  • ಫೋಟೋ ಗ್ಯಾಲರಿ

ಸಂಪರ್ಕಿಸಿ

  • SS9 TV Kannada
    Hubballi-Dharwad,
    Karnataka – 580020
  • +91 97392 86826
  • news@ss9tvkannada.com
© 2026 SS9 TV Kannada. All Rights Reserved. Website by Extro Marketing Agency TRUTH. TRUST. IMPACT.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • Home
  • ಕರ್ನಾಟಕ
  • ಹುಬ್ಬಳ್ಳಿ-ಧಾರವಾಡ
  • ಜಿಲ್ಲಾ ಸುದ್ದಿ
  • ರಾಜಕೀಯ
  • ಕ್ರೈಂ
  • ಸಿನಿಮಾ
  • ಕ್ರೀಡೆ
  • ವೀಡಿಯೊ
  • ಫೋಟೋ ಗ್ಯಾಲರಿ

© 2026 SS9 TV Kannada. All Rights Reserved.